ನೆಟ್ವರ್ಕ್ ಸಂಯೋಜನೆಗಳನ್ನು ನಿರ್ವಹಿಸುವುದು
- ನೆಟ್ವರ್ಕ್ ಸಂಯೋಜನೆಗಳನ್ನು ಪ್ರವೇಶಿಸಲು ಪೂರ್ವನಿಯೋಜಿತ ತೆರೆಯಲ್ಲಿರುವ ನೆಟ್ವರ್ಕ್
ಚಿಹ್ನೆಗೆ ಹೋಗಿ. - ನೆಟ್ವರ್ಕ್ ಸಂಯೋಜನೆಗಳು ವಿಂಡೋ ತೆರೆಯ ಮೇಲೆ ತೆರೆಯುತ್ತದೆ. ನಂತರ ಅನ್ಲಾಕ್
ಅನ್ನು ಕ್ಲಿಕ್ ಮಾಡಿ. - ದೃಢೀಕರಣ ಸಂವಾದ ಪೆಟ್ಟಿಗೆ ತೆರೆಯುತ್ತದೆ. ರೂಟ್ ಗಾಗಿ ಪಾಸ್ವರ್ಡ್ thinux ಎಂದು ನಮೂದಿಸಿ ಮತ್ತು ನಂತರ ಎಂಟರ್ ಕ್ಲಿಕ್ ಮಾಡಿ.
- ಈಗ ನೆಟ್ವರ್ಕ್ ಸಂಯೋಜನೆಗಳ ವಿಂಡೋದಲ್ಲಿ ಕನೆಕ್ಷನ್ಸ್ ಗೆ ಹೋಗಿ. ವೈರ್ಡ್ ಕನೆಕ್ಷನ್ ಅನ್ನು ಕ್ಲಿಕ್ ಮಾಡಿ ಮತ್ತು ನಂತರ ಗುಣಲಕ್ಷಣಗಳು ಕ್ಲಿಕ್ ಮಾಡಿ.
ನೆಟ್ಮಾಸ್ಕ್ ಮತ್ತು ಗೇಟ್ವೇ ರೌಟರ್ ಸಂಯೋಜನೆಗಳನ್ನು ನವೀಕರಿಸುವುದು
- ಈಥರ್ನೆಟ್ ಗುಣಲಕ್ಷಣಗಳು ವಿಂಡೋ ತೆರೆಯುತ್ತದೆ. ವೈರ್ಡ್ ಕನೆಕ್ಷನ್ ಅನ್ನು ಕ್ಲಿಕ್ ಮಾಡಿ ಮತ್ತು ಸಂರಚನೆ ಅನ್ನು ಸ್ಥಿರ ಐಪಿ ವಿಳಾಸ ಎಂದು ಆಯ್ಕೆಮಾಡಿ. ಸಂಪರ್ಕ ಸ್ಥಾಪಿಸಲು ಅಗತ್ಯವಾದ ನೆಟ್ವರ್ಕ್ ವಿವರಗಳಾದ ಐಪಿ ವಿಳಾಸ, ಸಬ್ನೆಟ್ ಮಾಸ್ಕ್, ಮತ್ತು ಗೇಟ್ವೇ ವಿಳಾಸ ನಮೂದಿಸಿ. ಸರ್ವರ್ ಮತ್ತು ತಿನ್ ಕ್ಲೈಂಟ್ ಎರಡೂ ಸಾಧನಗಳು ಒಂದೇ ನೆಟ್ವರ್ಕ್ನಲ್ಲಿರಬೇಕು.
- ಈಗ ಒಕೆ ಕ್ಲಿಕ್ ಮಾಡಿ ಮತ್ತು ನಂತರ ಲಾಕ್
ಕ್ಲಿಕ್ ಮಾಡಿ. ನೆಟ್ವರ್ಕ್ ಸಂಯೋಜನೆಗಳು ವಿಂಡೋ ಮುಚ್ಚಿ.
- ಟರ್ಮಿನಲ್ನಲ್ಲಿ ಪಿಂಗ್ ಆಜ್ಞೆಯನ್ನು ಬಳಸಿ ನೆಟ್ವರ್ಕ್ ಸಂಪರ್ಕ ಪರಿಶೀಲಿಸಿ. ಉದಾಹರಣೆ- ping 192.168.x.xxx.